ಅರ್ಚನಾ ಮಹಂತ (ಅಸ್ಸಾಮಿ: অ্চনা মহন্ত) (18 ಮಾರ್ಚ್ 1949 - 27 ಆಗಸ್ಟ್ 2020) ಭಾರತದ ಅಸ್ಸಾಂನ ಪ್ರಸಿದ್ಧ ಜಾನಪದ ಗಾಯಕಿ. ಅಸ್ಸಾಮಿ ಜಾನಪದ ಸಂಗೀತವನ್ನು ಜನಪ್ರಿಯಗೊಳಿಸುವ ಮತ್ತು ಸಂರಕ್ಷಿಸುವಲ್ಲಿ ಅರ್ಚನಾ ಮಹಂತ ಮತ್ತು ಅವರ ದಿವಂಗತ ಪತಿ ಖಗೇನ್ ಮಹಂತ ಅವರು ಅಗಾಧ ಕೊಡುಗೆಯನ್ನು ನೀಡಿದ್ದಾರೆ. ಸಂಗೀತ ಕಲಾವಿದ ದಂಪತಿಗಳು ಆಗಾಗ್ಗೆ ಒಟ್ಟಿಗೆ ಪ್ರದರ್ಶನ ನೀಡಿದರು, ಅನೇಕ ಯುಗಳ ಗೀತೆಗಳನ್ನು ಹಾಡಿದರು. == ವೈಯಕ್ತಿಕ ಜೀವನ == ಅರ್ಚನಾ ಮಹಂತ ಅಸ್ಸಾಮಿ ಜಾನಪದ ಗಾಯಕ ಖಗೇನ್ ಮಹಂತ ಅವರ ಪತ್ನಿ ಮತ್ತು ಜನಪ್ರಿಯ ಗಾಯಕ ಪಾಪೋನ್ ಅವರ ತಾಯಿ. == ಕೆಲಸ == ಅರ್ಚನಾ- ಖಾಗೆನ್ ಜೋಡಿಯ ಕೆಲವು ಪ್ರಸಿದ್ಧ ಹಾಡುಗಳು (ಅಸ್ಸಾಮಿಯಲ್ಲಿ): ಭೋರ್ ದುಪೋರಿಯಾ ಎ ಫೂಲ್ ಪಹ್ ಹಲಿಚಾ ಜಲಿಚಾ ಭಲ್ ಲಾಗಿ ಜೈ ಓ ಚಾಟಿಯೋ ಮಟಿಲೆ ಜುಂಟಿ ಉಲಲೇ ತೋರತಿ ಉಲಬೋ == ಸಾವು == ಅರ್ಚನಾ ಮಹಂತ 27 ಆಗಸ್ಟ್ 2020 ರಂದು ನಿಧನರಾದರು. ಅವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. == ಉಲ್ಲೇಖಗಳು ==